ಸುಳ್ಯ: ಬುದ್ದಿಮಾಂದ್ಯ ಯುವತಿ ಮೇಲೆ ಸಹೋದರನಿಂದಲೇ ಅತ್ಯಾಚಾರ: ಕೇಸು ದಾಖಲು, ಆರೋಪಿಯ ಬಂಧನ
ಸುಳ್ಯ : ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ, ಯುವತಿಯ ಸಹೋದರನ ಮೇಲೆ ಕೇಸು ದಾಖಲಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಮುಪ್ಪೇರಿಯಾ ಗ್ರಾಮದ ಬುದ್ದಿಮಾಂದ್ಯ ಯುವತಿಯ ಗರ್ಭವತಿಯಾಗಿದ್ದು ವಿಚಾರಣೆ ವೇಳೆ ಸಹೋದರನೇ ಅತ್ಯಾಚಾರವೆಸಗಿದ್ದು ಬೆಳಕಿಗೆ ಬಂದಿದೆ.
ಯುವತಿಯ ತಾಯಿ ನೀಡಿದ ದೂರಿನಂತೆ ಯುವಕನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




