August 12, 2026

ಮಂಗಳೂರು: ಕದ್ರಿ ರಸ್ತೆಯಲ್ಲಿ ಕಾರು ಅಪಘಾತ

0
image_editor_output_image1272252432-1689401292257.jpg

ಮಂಗಳೂರು: ಕದ್ರಿ ಸರ್ಕಿಟ್ ಹೌಸ್ ಬಿಜೈ ರಸ್ತೆ ಮಧ್ಯೆ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿ ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪಾರಾಗಿರುವ ಘಟನೆ ನಡೆದಿದೆ.

ಈ ಅಪಘಾತ ಶುಕ್ರವಾರ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಸಂಭವಿಸಿದ್ದು, ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ಬಲೇನೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಹತ್ತಿರದಲ್ಲಿದ್ದ ಗಿಡ ಗಂಟಿಗಳ ಮಧ್ಯೆ ಸಿಲುಕಿಕೊಂಡಿದೆ.

ಇನ್ನು ಕಾರು ಢಿಕ್ಕಿ ಹೊಡೆದ ರಭಸಕ್ಕೆ ದಾರಿ ದೀಪದ ಲೈಟ್ ಕಂಬ ಕಿತ್ತು ಅನಾತಿ ದೂರಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ ಮೂವರಿಗೆ ಅಲ್ಪ ಸ್ವಲ್ಪ ಗಾಯಾಗಳಾಗಿದೆ.

ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!