March 13, 2026

ಬಂಟ್ವಾಳ | ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು: ಅಪರಾಧಿಗೆ 3 ವರ್ಷ ಶಿಕ್ಷೆ, 10 ಸಾವಿರ ರೂ.ದಂಡ

0
image_editor_output_image1262437912-1689246999848.jpg

ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1ನ್ಯಾಯಾಲಯ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲುವಿನ ಸತೀಶ್ ಕುಲಾಲ್ ಶಿಕ್ಷೆಗೊಳಗಾದ ಅಪರಾಧಿ.

ಏನಿದು ಪ್ರಕರಣ..? 2019ರ ಆ.30ರಂದು ಸಂಜೆ ಬಾಲಕಿಯು ವಿಟ್ಲದಿಂದ ಬಸ್‌ನಲ್ಲಿ ಪ್ರಯಾಣಿಸಿ ಕೆದುವಾರು ಬಸ್‌ ತಂಗುದಾಣದ ಬಳಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ಹಿಂದಿನಿಂದ ಬಂದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿ ಬೊಬ್ಬೆ ಹೊಡೆದಾಗ ವಿಚಾರಿಸಿದ ವ್ಯಕ್ತಿಗೆ ಆರೋಪಿಯು ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ್ದ ಎಂದೂ ಆರೋಪ ವ್ಯಕ್ತವಾಗಿತ್ತು. ಬಾಲಕಿಗೆ ಲೈಂಗಿಕ ಕಿರುಕುಳ ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆಗಿನ ಎಸ್.ಐ.ಯಲ್ಲಪ್ಪ ಎಸ್. ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುಳಾ ಇಟ್ಟಿ ಅವರು ಆರೋಪಿಗೆ ಪೊಕ್ಸೊ ಕಲಂ 8ರಡಿ 3 ವರ್ಷ ಸಜೆ, 10,000 ರೂ.ದಂಡ ವಿಧಿಸಿದ್ದಾರೆ. ದಂಡ ತರಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ. ಐಪಿಸಿ ಕಲಂ 354ರಡಿ 1 ವರ್ಷ ಸಜೆ, 5,000 ರೂ.ದಂಡ ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಸಜೆ.ಐಪಿಸಿ ಕಲಂ 506ರ ಅಡಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.ಅಲ್ಲದೆ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

TAGSvittlavtvvtv vitlavtvvitla
admin
http://demo.vtvvitla.com
Facebook Twitter

RELATED NEWS
Breaking
ಮುಡಿಪು : ಶಾಲೆಯ ಆವರಣದ ಪಕ್ಕದಲ್ಲೇ ಬಾರ್ & ರೆಸ್ಟೋರೆಂಟ್ ಪ್ರಾರಂಭ; ವಿದ್ಯಾರ್ಥಿಗಳಿಂದ ಪ್ರತಿಭಟನೆ
admin – July 13, 2023
Breaking
ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ..!
admin – July 13, 2023
Breaking
ಕುಡುಕ ಪತಿಯಿಂದ ನಿತ್ಯ ಕಿರುಕುಳ; ಮಕ್ಕಳಿಗೆ ವಿಷ ಕೊಟ್ಟು ತಾನು ವಿಷ ಉಂಡ ತಾಯಿ – ಪುತ್ರಿ ಮೃತ್ಯು..!
admin – July 13, 2023
Breaking
ಬೆಳ್ಳಾರೆ: ರಸ್ತೆಗೆ ಉರುಳಿಬಿದ್ದ ಭಾರೀ ಗಾತ್ರದ ಮರ; ತೆರವು ಕಾರ್ಯ
admin – July 13, 2023

V Media Network 1st Floor, Lampcs Society Building, Bobbekeri, Vittal, Bantwal TQ. D.K
Mob: 9740888907, 9902758020.
Contact us: vitlavtv839@gmail.com

POPULAR POSTS

ಸುಳ್ಯ: ಮತಾಂತರ ಮಾಡಿ

Leave a Reply

Your email address will not be published. Required fields are marked *

error: Content is protected !!