March 13, 2026

ಸ್ಕೂಟಿ, ಬೈಕ್‍ಗೆ ಟೆಂಪೊ  ಢಿಕ್ಕಿ: ಪತಿ, ಪತ್ನಿ ಸ್ಥಳದಲ್ಲೇ ಸಾವು

0
image_editor_output_image1652839832-1688980361222.jpg

ಚಿಕ್ಕಬಳ್ಳಾಪುರ: ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರತ್ಯೇಕವಾಗಿ ತೆರಳುತ್ತಿದ್ದ ಸ್ಕೂಟಿ ಹಾಗೂ ಬೈಕ್‍ಗೆ ಟೆಂಪೋ ಡಿಕ್ಕಿಯಾಗಿ ಗಂಡ ಹಾಗೂ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕಾಚನಹಳ್ಳಿ ಬಳಿ ನಡೆದಿದೆ.

ಕುರಬೂರು ಗ್ರಾಮದ ಶ್ರೀರಾಮ್ (40) ಹಾಗೂ ಶ್ಯಾಮಲ (35) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಕೋಲಾರದ ಕಡೆಯಿಂದ ಚಿಂತಾಮಣಿ ಕಡೆಗೆ ಸ್ಕೂಟಿ ಹಾಗೂ ಬೈಕ್ ಮೂಲಕ ಮಕ್ಕಳಾದ ಮೋಕ್ಷ ಹಾಗೂ ತುಷಾರ್ ಸೇರಿದಂತೆ ಅಣ್ಣನ ಮಗ ತೇಜಸ್‍ನನ್ನು ಕೂರಿಸಿಕೊಂಡು ತೆರಳುತ್ತಿದ್ದರು.

ಈ ವೇಳೆ ಚಿಂತಾಮಣಿ ಕಡೆಯಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಟೆಂಪೋ ಡಿಕ್ಕಿಯಾಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರು ಮಕ್ಕಳು ಗಾಯಗೊಂಡಿದ್ದು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!