March 13, 2026

ಆನ್ ಲೈನ್ ಬೆಟ್ಟಿಂಗ್ ಗೇಮ್ ಆಡುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

0
image_editor_output_image330412983-1688969465699.jpg

ಶಿವಮೊಗ್ಗ: ಆನ್ ಲೈನ್ ಬೆಟ್ಟಿಂಗ್ ಗೇಮ್ ಆಡುತ್ತಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಸಮೀಪದ ಕಟ್ಟಹಕ್ಲಿನಲ್ಲಿ ನಡೆದಿದೆ.

ಮಿಥುನ್ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮಿಥುನ್ ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳನ್ನು ಆಡುತ್ತಿದ್ದು, ಇದರಿಂದ ಸಾಲ ಮಾಡಿಕೊಂಡು ಬಳಿಕ ಸಾಲ ತೀರಿಸಲಾಗದೆ ನೇಣುಹಾಕಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮಿಥುನ್ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲಿನಲ್ಲಿ ಮೊಬೈಲ್ ಶಾಪ್ ಮಾಡಿಕೊಂಡು ಜೀವನ ನಡೆಸುತಿದ್ದ ಈತ ತನ್ನ ಮೊಬೈಲ್ ಶಾಪ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!