ಗುದದ್ವಾರದ ಮೂಲಕ ಗಾಳಿಯನ್ನು ಪಂಪ್ ಮಾಡಿದ ಸಹೋದ್ಯೋಗಿಗಳು:
ವ್ಯಕ್ತಿ ಮೃತ್ಯು
ಪಶ್ಚಿಮ ಬಂಗಾಳ: ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ಕೆಲಸದ ವೇಳೆ ವಿನೋದಕ್ಕಾಗಿ ಸಹೋದ್ಯೋಗಿಗಳು ಗುದದ್ವಾರದ ಮೂಲಕ ಗಾಳಿಯನ್ನು ಪಂಪ್ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಗಿರಣಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳು ರೆಹಮತ್ ಆಲಿಯನ್ನು ಹಿಡಿದು ಆತನ ಗುದದ್ವಾರಕ್ಕೆ ಏರ್‌ಪಂಪ್ ಇಟ್ಟು ಪಂಪ್ ಮಾಡಿದ್ದಾರೆ. ರೆಹಮತ್ ಆಲಿ ಅದೆಷ್ಟೇ ವಿರೋಧಿಸಿದರು ಆತನನ್ನು ಬಲವಂತವಾಗಿ ಹಿಡಿದ ಸಹದ್ಯೋಗಿಗಳು ತಮಾಷೆಗಾಗಿ ಈ ಕಾರ್ಯ ಮಾಡಿದ್ದಾರೆ ಗುದದ್ವಾರಕ್ಕೆ ಏರ್ ಪಂಪ್ ಮಾಡುತ್ತಿದ್ದಂತೆ ಆತನ ಹೊಟ್ಟೆ ಉಬ್ಬಿದೆ. ಕ್ಷಣದಲ್ಲೇ ರೆಹಮತ್ ಆಲಿ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಸಹದ್ಯೋಗಿಗಳು ಸ್ಥಳೀಯ ಚುಂಚುರಾ ಇಮಾಮ್‌ಬಾರಾ ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ ಆರೋಗ್ಯ ಕ್ಷೀಣಿಸುತ್ತಾ ಸಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮರುದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗುದದ್ವಾರದಿಂದ ಒತ್ತಡವಾಗಿ ಹಾಕಿರುವ ಗಾಳಿಯಿಂದ ರೆಹಮತ್ ಆಲಿ ಲಿವರ್ ಸೇರಿದಂತೆ ಇತರ ಅಂಗಾಗಳು ಡ್ಯಾಮೇಜ್ ಆಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ರೆಹಮತ್ ಆಲಿಗೆ 10 ದಿನ ಸತತ ಚಿಕಿತ್ಸೆ ನೀಡಲಾಗಿತ್ತು. ಆದರೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ರೆಹಮತ್ ಆಲಿ ಬದುಕು ಉಳಿಯಲಿಲ್ಲ. ಈ ಬಗ್ಗೆ ರೆಹಮತ್ ಕುಟುಬಂಸ್ಥರು ದೂರು ನೀಡಿದ್ದಾರೆ. ಪರಿಹಾರ ಹಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ತಮಾಷೆ ಪ್ರಕರಣದಲ್ಲಿ ಸಹದ್ಯೋಗಿ ಶೆಹಝಾದಾ ಖಾನ್ ಪ್ರಮುಖ ಆರೋಪಿಯಾಗಿದ್ದಾನೆ. ಈತ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕೇಸ್ ದಾಖಲಾಗಿದೆ.
ರೆಹಮತ್ ಆಲಿ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಹೋದರ ಅಜ್ಮತ್ ಆಲಿ, ಈ ಘಟನೆಗೆ ಸಹದ್ಯೋಗಿಗಳು ನೇರ ಕಾರಣರಾಗಿದ್ದಾರೆ. ನಮ್ಮ ಅಣ್ಣ ಕೆಲದಲ್ಲಿ ಶಿಸ್ತಿನಿಂದ ಇರುತ್ತಿದ್ದ. ರಹೆಮತ್ ಆಲಿಯನ್ನು ಹಿಡಿದು ಬಲವಂತವಾಗಿ ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡುವ ತಮಾಷೆ ಮೊದಲೆ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಜ್ಮತ್ ಆಲಿ ಆಗ್ರಹಿಸಿದ್ದಾರೆ.





