ಮಂಗಳೂರು: ತಡವಾಗಿ ಲ್ಯಾಂಡ್ ಮುಂಬೈ, ದುಬೈನಿಂದ ಆಗಮಿಸಿರುವ ವಿಮಾನಗಳು
ಮಂಗಳೂರು: ಮುಂಬೈ ಹಾಗೂ ದುಬೈನಿಂದ ಆಗಮಿಸಿರುವ ವಿಮಾನಗಳು ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ತಡವಾಗಿ ಲ್ಯಾಂಡ್ ಆಗಿದೆ.
ಹೈದರಾಬಾದ್ ನಿಂದ ಆಗಮಿಸಿರುವ ವಿಮಾನ ಕೂಡ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಭಾರಿ ಮಳೆಯಿಂದಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಳೆಗಾಲದಲ್ಲಿ ಇದು ಸಾಮಾನ್ಯ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.




