March 13, 2026

ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ DIG ವಿಜಯ್ ಕುಮಾರ್

0
image_editor_output_image1807320553-1688708394346.jpg

ಕೊಯಂಬತ್ತೂರು: ಡಿಐಜಿಯೊಬ್ಬರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

ಡಿಐಜಿ ಸಿ ವಿಜಯ್‌ಕುಮಾರ್ ಸಾವಿನ ದಾರಿ ಹಿಡಿದ ಪೊಲೀಸ್ ಅಧಿಕಾರಿ. ಕೊಯಂಬತ್ತೂರಿನ ರೇಸ್‌ಕೋರ್ಸ್ ಬಳಿಯ ಕ್ಯಾಂಪ್ ಆಫೀಸ್ ಬಳಿ ಅವರು ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಈ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ.

ಮುಂಜಾನೆ ಎದ್ದು ವಾಕ್ ಹೋಗಿದ್ದ ಡಿಜಿಪಿ ವಿಜಯ್‌ ಕುಮಾರ್ ಬೆಳಗ್ಗೆ 6.45ರ ವೇಳೆಗೆ ಕ್ಯಾಂಪ್ ಆಫೀಸ್ ಬಳಿ ಬಂದಿದ್ದರು. ನಂತರ ತಮ್ಮ ವೈಯಕ್ತಿಕ ಅಂಗರಕ್ಷಕ ಅಧಿಕಾರಿಗೆ ಪಿಸ್ತೂಲ್‌ ನೀಡುವಂತೆ ಕೇಳಿದ್ದು, ಆತ ಡಿಐಜಿಗೆ ಪಿಸ್ತೂಲ್ ನೀಡಿ ಕಚೇರಿಯಿಂದ ಹೊರಗೆ ಬಂದಿದ್ದಾರೆ.

ಇದಾಗಿ ಐದು ನಿಮಿಷದಲ್ಲಿ ಅಂದರೆ 6.50ಕ್ಕೆ ಡಿಐಜಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!