ತೆಕ್ಕಟ್ಟೆ: ಕೆರೆಗೆ ಜಾರಿಬಿದ್ದು ಕೆದೂರು ಗ್ರಾಮದ ನಿವಾಸಿ ಸಾವು
ತೆಕ್ಕಟ್ಟೆ: ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ಮಲ್ಯಾಡಿ ಗ್ರಾಮದ ನಿವಾಸಿ ದಿನಕರ ಶೆಟ್ಟಿ (46) ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು, ದಾರುಣವಾಗಿ ಸಾವಿಗೀಡಾದ ಘಟನೆ ಜು.4 ರ ತಡರಾತ್ರಿ 11.30ರ ಸುಮಾರಿಗೆ ಸಂಭವಿಸಿದೆ.
ತೆಕ್ಕಟ್ಟೆ ಸಮೀಪದ ಮಣೂರಿನ ಹಳ್ಳಿಮನೆ ಹೋಟೆಲ್ ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿನಕರ ಶೆಟ್ಟಿ (46) ಅವರು ಎಂದಿನಿಂದ ಕೆಲಸ ಮುಗಿಸಿ ತನ್ನ ಮ್ಯಾಸ್ಟ್ರೊ ವಾಹನದ ಮೂಲಕ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮನೆಯ ಅನತಿ ದೂರದಲ್ಲಿರುವ ದೇವರ ಕೆರೆಗೆ ಆಕಸ್ಮಿಕವಾಗಿ ವಾಹನ ಸಹಿತ ಆಯಾತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.




