March 24, 2026

ಮಂಗಳೂರು: ಪ್ರಾಣಿಗಳ ರಕ್ಷಕಿ ರಜನಿ ಶೆಟ್ಟಿಗೆ ನೆರೆಮನೆಯ ಮಹಿಳೆಯಿಂದ ಹಲ್ಲೆ

0
pro.webp

ಮಂಗಳೂರು: ಬೀದಿ ನಾಯಿಗಳ ರಕ್ಷಕಿ ರಜನಿ ಶೆಟ್ಟಿ ಅವರ ಮೇಲೆ ನೆರೆಮನೆಯ ಮಹಿಳೆಯೊಬ್ಬರು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಮಂಜುಳಾ ವಿರುದ್ಧ ರಜನಿ ಶೆಟ್ಟಿ ಅವರು ದೂರು ದಾಖಲಿಸಲಿದ್ದಾರೆ.

ಈ ಕುರಿತು ಮಾತನಾಡಿರುವ ರಜನಿ, ನಾನು ಬಾಡಿಗೆ ಮನೆಯಲ್ಲಿ ನಾಯಿಗಳನ್ನು ಸಾಕುತ್ತಿದ್ದು, ಆದರೆ ಮಂಜುಳಾ ಸ್ಥಳದಿಂದ ಜಾಗ ಖಾಲಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಾನು ಕಳೆದ 22 ವರ್ಷಗಳಿಂದ ಬೀದಿ ನಾಯಿಗಳ ಆರೈಕೆ ಮಾಡುತ್ತಿದ್ದೇನೆ. ನಾಯಿಗಳಿಂದಾಗಿ ಯಾರಿಗೂ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಾಗಿಲ್ಲ. ಆದರೆ ಮಂಜುಳಾ ನನ್ನೊಂದಿಗೆ ಪ್ರತಿದಿನ ಜಗಳವಾಡುತ್ತಾರೆ. ಮಂಜುಳಾ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಎಂದಿದ್ದಾರೆ.

ಇನ್ನು ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಾಣಿ ಪ್ರೇಮಿಯಾಗಿರುವ ರಜನಿ ಶೆಟ್ಟಿ ಅವರು ಪ್ರಾಣಿಗಳನ್ನು ರಕ್ಷಿಸಿದ್ದಕ್ಕಾಗಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದು, ಅವರು ಪ್ರತಿದಿನ 400 ರಿಂದ 500 ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದು ಜೊತೆಗೆ ತನ್ನ ಮನೆಯಲ್ಲಿ ಹಲವಾರು ನಾಯಿಗಳು, ಬೆಕ್ಕುಗಳು ಮತ್ತು ಪಕ್ಷಿಗಳನ್ನು ಸಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!