March 24, 2026

ಬೆಳ್ತಂಗಡಿ: ಬಸ್ಸಿನಲ್ಲಿ ಕುಸಿದು ಬಿದ್ದು ಲಾಯಿಲದ ವ್ಯಕ್ತಿ ಮೃತ್ಯು

0
image_editor_output_image-210252243-1687841559264.jpg

ಬೆಳ್ತಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳೂರಿನ ಪಡೀಲ್ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಲಾಯಿಲ ನಿವಾಸಿ ತಾಜ್ ಬಾವುಂಞಿ ಎಂದು ಗುರುತಿಸಲಾಗಿದೆ.

ತಾಜ್ ಬಾವುಂಞಿ ಅವರು ಕೆಲಸಕ್ಕೆಂದು ಬೆಳಗ್ಗೆ ಮಂಗಳೂರಿಗೆ ತೆರಳಿ ಸಂಜೆ ಮನೆಗೆ ಹಿಂದಿರುಗಿ ಬಸ್ಸಿನಲ್ಲಿ ಬರುತಿದ್ದ ವೇಳೆ ಮಂಗಳೂರಿನ ಪಡೀಲ್ ಬಳಿ ಬಸ್ಸಿನಲ್ಲಿಯೇ ಕುಸಿದು ಬಿದಿದ್ದಾರೆ.

ಕೂಡಲೇ ಸಮೀಪದ ಆಸ್ಪತ್ರೆಯ ಬಳಿ ಬಸ್ ನಿಲ್ಲಿಸಿ ಅವರನ್ನು ಕಂಡೆಕ್ಟರ್ ಸೇರಿದಂತೆ ಬಸ್ಸಲ್ಲಿದ್ದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ.

ಅದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಬಳಿಕ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಲಾಯಿಲನೂರುಲ್ ಹುದಾ ಎಜುಕೇಶನ್ ಅಂಡ್ ಚಾರ್ಟೆಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದ ಅವರು ಇಲೆಕ್ಟ್ರಿಷಿಯನ್ ಆಗಿ ವೃತ್ತಿ ಮಾಡುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!