March 24, 2026

ಕುಂದಾಪುರ: ದೇವಸ್ಥಾನದ ಕೆರೆಗೆ ಮೀನು ಹಿಡಿಯಲು ಹೋದ ಯುವಕ ಮೃತ್ಯು

0
20230626_221416.jpg

ಕುಂದಾಪುರ: ನಗರದ ಪ್ರತಿಷ್ಟಿತ ಕಾಳಾವರ ಶ್ರೀ ಸುಬ್ರಹ್ಮಣ್ಯ ದೇವರ ಕೆರೆಗೆ ಮೀನು ಹಿಡಿಯಲು ಹೋಗಿದ್ದ ಕಾಳಾವರ ನರಿಕೊಡ್ಲು ಹರೀಶ್ ಪೂಜಾರಿ ಎಂಬಾತ ಕೆರಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ.

ಹರೀಶ್ ಪೂಜಾರಿ ಭಾನುವಾರ ಭಾರೀ ಮಳೆಯಿದ್ದ ಕಾರಣ ಮೀನು ಬೇಟೆಗೆ ಕಾಳಾವರ ದೇವಸ್ಥಾನದ ಕೆರೆಗೆ ಹೋಗಿದ್ದರು. ಆದರೆ ಅದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾತ್ರಿಯಿಡೀ ಹುಡುಕಾಡಿದರೂ ಹರೀಶ್ ದೇಹ ಪತ್ತೆಯಾಗಲಿಲ್ಲ. ಬಳಿಕ ಸೋಮವಾರ ಬೆಳಿಗ್ಗೆ ಈಶ್ವರ ಮಲ್ಪೆ ತಂಡ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಮೃತದೇಹ ಪತ್ತೆ ಮಾಡಿದ್ದಾರೆ.”

Leave a Reply

Your email address will not be published. Required fields are marked *

error: Content is protected !!