March 24, 2026

ಕಾಸರಗೋಡು: ಯುವತಿಗೆ ಕಿರುಕುಳ: ಪ್ರಶ್ನಿಸಿದ ಯುವಕನ ಇರಿದು ಹತ್ಯೆ

0
IMG-20230626-WA0025.jpg

ಕಾಸರಗೋಡು: ಯುವಕನೋರ್ವನನ್ನು ಇರಿದು ಕೊಲೆಗೈದ ಘಟನೆ ಬದಿಯಡ್ಕದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಮಧೂರು ಅರಂತೋಡಿನ ಸಂದೀಪ್ ಕೊಲೆಗೀಡಾದವರು. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪೆರ್ಲ ಕಜಂಪಾಡಿಯ ಪವನ್ ರಾಜ್ ಎಂಬಾತನ ಪತ್ತೆಗೆ ಬದಿಯಡ್ಕ ಪೊಲೀಸರು ಶೋಧ ನಡೆಸುತ್ತಿದ್ದರು

ಗಂಭೀರ ಗಾಯಗೊಂಡ ಸಂದೀಪ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಇಂದು ಮಧ್ಯಾಹ್ನದ ವೇಳೆ ಮೃತಪಟ್ಟಿದ್ದಾನೆ. ಯುವತಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕಾರವಾಗಿ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!