September 20, 2024

ಮಂಗಳೂರು | ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಗುಟ್ಕಾ, ತಂಬಾಕು, ಅಮಲು ಪದಾರ್ಥ ಮಾರಾಟ: 348 ಅಂಗಡಿಗಳಿಗೆ ಪೊಲೀಸರ ಧಿಡೀರ್‌ ದಾಳಿ

0

ಮಂಗಳೂರು: ಮಂಗಳೂರು ನಗರದ ಕಮೀಷನರೇಟ್‌ನ ವ್ಯಾಪ್ತಿಯ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಗುಟ್ಕಾ, ತಂಬಾಕು ಸಹಿತ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದ 153 ಅಂಗಡಿಗಳ ಮೇಲೆ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿದ್ದ ಒಟ್ಟು 348 ಅಂಗಡಿಗಳಿಗೆ ಪೊಲೀಸರು ಧಿಡೀರ್‌ ದಾಳಿ ನಡೆಸಿದ್ದಾರೆ. ಈ ವೇಳೆ 153 ಅಂಗಡಿಗಳಲ್ಲಿ ಅಮಲು ಪದಾರ್ಥಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಆ ಅಂಗಡಿಗಳ ವಿರುದ್ಧ COTPA (Cigarettes and Other Tobacco Products Act) ಕಾಯ್ದೆಯಡಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!