December 15, 2025

ಕಾಸರಗೋಡು: ಕಂಟೈನರ್ ಲಾರಿ ಢಿಕ್ಕಿ: ಪಾದಾಚಾರಿ ವೃದ್ದ ಮೃತ್ಯು

0
dead-4-1.jpg

ಕಾಸರಗೋಡು: ಕಂಟೈನರ್ ಲಾರಿ ಢಿಕ್ಕಿ ಹೊಡೆದು ವೃದ್ದರೋರ್ವರು ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಬಂಬ್ರಾಣ ದ ಮೊಯಿದಿನ್ ಕುಂಞ (78) ಮೃತ ಪಟ್ಟವರು.

ರಸ್ತೆ ದಾಟುತ್ತಿದ್ದ ಸಂಧರ್ಭದಲ್ಲಿ ಈ ಅಪಘಾತ ನಡೆದಿದ್ದು, ಝೀಬ್ರಾ ಲೈನ್ ಮೂಲಕ ರಸ್ತೆ ದಾಟಲು ನಿಂತಿದ್ದಾಗ ಅತೀ ವೇಗದಿಂದ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಮೃತ ದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!