September 20, 2024

ಸುಳ್ಯ: ಕಾಂಗ್ರೆಸ್‌ ಮುಖಂಡ ಸಂಶುದ್ದೀನ್‌ ಮನೆಯಿಂದ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0

ಅರಂತೋಡು: ಕಾಂಗ್ರೆಸ್‌ ಮುಖಂಡ ಎಸ್‌. ಸಂಶುದ್ದೀನ್‌ ಅವರ ಅರಂಬೂರು ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ಸುಳ್ಯ ಪೊಲೀಸರು ಕರೆತಂದು ಮಹಜರು ನಡೆಸಿದ್ದಾರೆ.

ಆರೋಪಿಗಳಾದ ಫಯಾಜ್‌ನನ್ನು ಸಕಲೇಶಪುರ ಹಾಗೂ ಪ್ರಸನ್ನನನ್ನು ಬೆಂಗಳೂರಿನ ಗೋವಿಂದ ನಗರದಿಂದ ಬಂಧಿಸಲಾಗಿದೆ.

ಇಬ್ಬರು ಆರೋಪಿಗಳನ್ನು ಸುಳ್ಯಕ್ಕೆ ಕರೆತಂದು ದರೋಡೆಗೆ ಒಳಗಾಗಿದ್ದ ಮನೆ ಮತ್ತು ಪರಿಸರದ ಮಹಜರು ನಡೆಸಿದ್ದು ಬಳಿಕ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳ ಮೇಲೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಕಡೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!