ಅಂಗನವಾಡಿಯಿಂದ ಮನೆಗೆ ತೆರಳುತ್ತಿದ್ದಾಗ ಲಾರಿ ಹರಿದು ಬಾಲಕಿ ಸಾವು
ದಾವಣಗೆರೆ: ಅಂಗನವಾಡಿ ಮುಗಿಸಿ ಅಜ್ಜಿ ಜೊತೆ ಮನೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಎಂ ಸ್ಯಾಂಡ್ ಟಿಪ್ಪರ್ ಹರಿದು ಬಾಲಕಿ ಸಾವನ್ನಪ್ಪಿರುವ ಮನಕಲಕುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ.
ಕುಂದುವಾಡ ಗ್ರಾಮದ ಗಣೇಶ್ ಪುತ್ರಿ ಚರಸ್ವಿ (3) ಸಾವನ್ನಪ್ಪಿದ ಬಾಲಕಿ. ಚಕ್ರ ಹರಿದ ರಭಸಕ್ಕೆ ಬಾಲಕಿ ಮೆದುಳು ಚಿದ್ರ ಚಿದ್ರಗೊಂಡಿದೆ.
ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಅವಘಡ ನಡೆದಿದ್ದು ಮಾತ್ರವಲ್ಲದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ತವರಿನಲ್ಲಿ ಈ ರೀತಿ ಘಟನೆ ನಡೆದಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.




