ಇಂಜಿನಿಯರ್ ನ ಕಪಾಳಕ್ಕೆ ಬಾರಿಸಿದ ಶಾಸಕಿ: ವೀಡಿಯೊ ವೈರಲ್
ಮಹಾರಾಷ್ಟ್ರ: ಶಾಸಕಿಯೊಬ್ಬರು ಇಂಜಿನಿಯರ್ ನ ಕಪಾಳಕ್ಕೆ ಬಾರಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮೀರಾ ಭಯಂದರ್ ಮುನ್ಸಿಪಲ್ ಕಾರ್ಪೊರೇಷನ್ ಯಾವುದೇ ಸೂಚನೆಯಿಲ್ಲದೆ ಮನೆಯೊಂದರಲ್ಲಿ ವಾಸಿಸುತ್ತಿದ್ದವರನ್ನು ಹೊರಹಾಕಿ ಕಟ್ಟಡವನ್ನು ನೆಲಸಮಗೊಳಿಸಲು ಬಂದಿದ್ದಾರೆ.
ಇದರಿಂದ ಕುಟುಂಬದ ಮಹಿಳೆಯರು, ಮಕ್ಕಳು ಸೇರಿದಂತೆ ನಿವಾಸಿಗಳು ರಸ್ತೆಯಲ್ಲೇ ಪರದಾಡಬೇಕಾಗುವ ಸ್ಥಿತಿ ನಿರ್ಮಾಣವಾಗಿದ್ದು, ಈ ಕಷ್ಟವನ್ನು ಮಹಿಳೆಯೊಬ್ಬರು ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಶಾಸಕಿ ಗೀತಾ ಜೈನ್ ಅವರ ಬಳಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಇಂಜಿನಿಯರ್ ಸೇರಿದಂತೆ ಅಧಿಕಾರಿಗೆ ಶಾಸಕಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಇಂಜಿನಿಯರ್ ಅವರ ಕಾಲರ್ ಹಿಡಿದು ಆತನ ಕಪಾಳಕ್ಕೆ ಬಾರಿಸಿದ್ದಾರೆ.




