ಆಶ್ರಮದಲ್ಲಿ ಅನಾಥ ಬಾಲಕಿಯ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರ: ಸ್ವಾಮೀಜಿಯ ಬಂಧನ
ಅಮರಾವತಿ: ತಾನೇ ನಡೆಸುತ್ತಿದ್ದ ಆಶ್ರಮದಲ್ಲಿ 15 ವರ್ಷದ ಅನಾಥ ಬಾಲಕಿ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಆಂಧ್ರಪ್ರದೇಶದಲ್ಲಿ ( ಸ್ವಾಮೀಜಿಯೊಬ್ಬರನ್ನು ಬಂಧಿಸಲಾಗಿದೆ.
ಘಟನೆ ವಿಶಾಖಪಟ್ಟಣದಲ್ಲಿನ ಆಶ್ರಮದಲ್ಲಿ ನಡೆದಿದೆ. ಬಾಲಕಿ ಜೂನ್ 13ರಂದು ಆಶ್ರಮದಿಂದ ತಪ್ಪಿಸಿಕೊಂಡು ಹೋಗಿದ್ದು, ಈ ಬಗ್ಗೆ ಪೊಲೀಸರು ನಾಪತ್ತೆಯ ದೂರನ್ನು ದಾಖಲಿಸಿಕೊಂಡಿದ್ದರು. ಬಳಿಕ ಬಾಲಕಿ ವಿಜಯವಾಡ ತಲುಪಿ ಆಶ್ರಮದ ಸ್ವಾಮೀಜಿ ಪೂರ್ಣಾನಂದ ಸರಸ್ವತಿ ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




