July 4, 2026

ಪುತ್ತೂರು: ರಾಜಕೀಯ ವೈಷ್ಯಮ್ಯದ ಸೇಡು: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

0
IMG-20230611-WA0014.jpg

ಪುತ್ತೂರು : ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂಬವರಿಗೆ ಪುರುಷರಕಟ್ಟೆ ಸಮೀಪದ ಇಂದ್ರನಗರ ರಕ್ತೇಶ್ವರಿಕಟ್ಟೆ ನಿವಾಸಿ ಪ್ರವೀಣ್ ಎಂಬಾತ ಹಲ್ಲೆ ನಡೆಸಿ ಬಳಿಕ ಮನೆಗೆ ನುಗ್ಗಿ ಜೀವ ಬೆದರಿಕೆಯೊಡ್ಡಿರುವ ಘಟನೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷಕಟ್ಟೆಯಲ್ಲಿ ನಡೆದಿದೆ.

ರಾಜಕೀಯ ವೈಷ್ಯಮ್ಯದ ಸೇಡಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಹೊಳಗಾದ ಪ್ರವೀಣ್ ಕಳೆದ ಕೆಲ ತಿಂಗಳ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ. ಪ್ರವೀಣ್ ಚುನಾವಣೆ ವೇಳೆ ಶಾಸಕ ಅಶೋಕ್ ರೈ ಪರ ಬಿರುಸಿನ ಪ್ರಚಾರ ಮಾಡಿದ್ದ. ಪುರುಷರಕಟ್ಟೆ ಭಾಗದಲ್ಲಿ ಕೆಲ ಬಿಜೆಪಿ ಮತಗಳನ್ನ ಸೆಳೆಯುವಲ್ಲಿ ಪ್ರವೀಣ್ ಯಶಸ್ವಿಯಾಗಿದ್ದ. ಪ್ರವೀಣ್ ಆಚಾರ್ಯ ಕಾಂಗ್ರೆಸ್ ನ 188 ಬೂತ್ ನ ಸಕ್ರಿಯ ಕಾರ್ಯಕರ್ತನಾಗಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿ ಇಂದು ಪ್ರವೀಣ್ ಮೇಲೆ ಪ್ರವೀಣ್ ಆಚಾರ್ಯ ಅಟ್ಯಾಕ್ ಮಾಡಿದ್ದಾನೆ.

ಹಲ್ಲೆಗೊಳಗದ ಪ್ರವೀಣ್ ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!