March 24, 2026

ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ಕಳವು

0
IMG-20230620-WA0033.jpg

ಉಡುಪಿ: ಸಿದ್ದಾಪುರ ಗ್ರಾಮದ ಹೆನ್ನಾಬೈಲ್ಲು ಫಾರೆಸ್ಟ್ ವಸತಿ ಗೃಹದ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಕೌಸರ ಭಾನು ಎಂಬವರ ಮನೆಯ ಎದುರುಗಡೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಾಪಾಟಿನಲ್ಲಿದ್ದ ಸುಮಾರು 8,00,000 ರೂ. ಮೌಲ್ಯದ 25 ಪವನ್ ತೂಕದ ಚಿನ್ನಾಭರಣ, 15,000ರೂ. ಮೌಲ್ಯದ ಮಗುವಿನ ಬೆಳ್ಳಿಯ ಆಭರಣ ಹಾಗೂ 53,000ರೂ. ನಗದು ಕಳವು ಮಾಡಿ ಕೊಂಡು ಹೋಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!