ವಿಟ್ಲ: ಪಡಿಬಾಗಿಲು ಶಾಲೆಯಲ್ಲಿ ಹಳೆವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ: 2009-2010 ನೇ ಸಾಲಿನಲ್ಲಿ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಗೌರವ
ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ .ಶಾಲೆ ಪಡಿಬಾಗಿಲಲ್ಲಿ 2009-2010 ರ ಬ್ಯಾಚ್ ನ ಹಳೆವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಜೂ. 18 ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ 2009-2010 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧ್ಯಾಪಕರಾದ ಶ್ರೀ ಭಾಸ್ಕರ ಅಡ್ವಾಳ, ರಾಜೇಂದ್ರ ಪ್ರಸಾದ್, ರವಿ ನಾಯ್ಕ, ಶ್ರೀಮತಿ ರೇವತಿ , ಬೃಂದಾ , ಮಲ್ಲಿಕಾ, ಜಯಂತಿ ಹಾಗೂ ಸುರೇಖ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾಸಿರಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಫ್ರಭಾಕರ ಶೆಟ್ಟಿ,ಗೌರವ ಅಧ್ಯಕ್ಷರಾ ಲಿಂಗಪ್ಪ ಗೌಡ, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ, ಜಿನಚಂದ್ರ ಜೈನ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ವಿಶಾಲಕ್ಷಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತ ಕೆ.ರೈ ಮತ್ತು 2009-2010 ನೇ ಬ್ಯಾಚಿನ ಹಳೆವಿದ್ಯಾರ್ಥಿಗಳು ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಇನ್ನು ಸವಿ ನೆನಪಿಗಾಗಿ ಹಳೆವಿದ್ಯಾರ್ಥಿಗಳು ಕುಡಿಯುವ ನೀರಿನ ಘಟಕವನ್ನು ಶಾಲೆಗೆ ಹಸ್ತಾಂತರಿಸಿದರು.




