July 3, 2026

ತಪ್ಪು ತಿಳುವಳಿಕೆಯಿಂದ ಪ್ರೇಮಿಗಳಿಬ್ಬರ ಆತ್ಮಹತ್ಯೆ

0
image_editor_output_image1034395201-1687157076976.jpg

ಬೆಂಗಳೂರು: ಪ್ರೇಮಿಗಳಿಬ್ಬರು ತಪ್ಪು ತಿಳುವಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಧಾರ ಸಂಶುಕ ಮತ್ತು ದೀಪೇಂದ್ರ ಕುಮಾರ್ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಧಾರ ಸಂಶುಕ ಉತ್ತರ ಪ್ರದೇಶ ಮೂಲದವಳಾಗಿದ್ದಳು. ದೀಪೇಂದ್ರ ಮತ್ತು ಸಂಶುಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಸಂಶುಕಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಆದ ಕಾರಣದಿಂದ ದೀಪೇಂದ್ರ ಆಕೆಯನ್ನು ಪೋಷಕರು ತವರು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಭಾವಿಸಿದ್ದಾನೆ. ಇದರಿಂದ ನೊಂದ ದೀಪೇಂದ್ರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಯುವತಿಗೆ 2 ದಿನಗಳ ಬಳಿಕ ತಿಳಿದು ಬಂದಿದೆ.

ಈ ಕಾರಣದಿಂದ ಈಕೆ ಉತ್ತರ ಪ್ರದೇಶಕ್ಕೆ ಹೋಗದೇ ಬೆಂಗಳೂರಿನಲ್ಲಿಯೇ ಇದ್ದಳು. ಪ್ರಿಯತಮನ ಅಗಲಿಕೆಯ ವಿಚಾರ ತಿಳಿದ ಬಳಿಕ ಸಂಶುಕ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಕುರಿತು ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!