March 24, 2026

ಬೆಳ್ತಂಗಡಿ| ಸರಕಾರಿ ಬಸ್ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ: ಮೂವರು ಆರೋಪಿಗಳ ಬಂಧನ

0
image_editor_output_image-631948881-1687156096092.jpg

ಬೆಳ್ತಂಗಡಿ: ವೇಗದೂತ ಬಸ್ ಅನ್ನು ನಿಗದಿತ ನಿಲುಗಡೆಯ ಹೊರತಾಗಿ ಸಿಕ್ಕ ಸಿಕ್ಕಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದ ಬಸ್ ಕಂಡಕ್ಟರ್ ನನ್ನು ಬೆಂಬಲಿಸಿ, ಗಲಾಟೆ ಎಬ್ಬಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬಸ್ ನಿರ್ವಾಹಕ ದೂರು ನೀಡಿದ ದೂರಿನಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಚಾರ್ಮಾಡಿ ಗ್ರಾಮದ ಮುಹಮ್ಮದ್ ಶಬೀರ್(21), ಮುಹಮ್ಮದ್ ಮಹ್ರೂಫ್(22) ಹಾಗೂ ಮುಹಮ್ಮದ್ ಮುಬಶ್ಶಿರ್(23) ಬಂಧಿತ ಆರೋಪಿಗಳಾಗಿದ್ದಾರೆ.

ಶನಿವಾರ ಸಂಜೆ ಮಂಗಳೂರಿನಿಂದ ಮೂಡಿಗೆರೆಗೆ ತೆರಳುತ್ತಿದ್ದ ಮೂಡಿಗೆರೆ ಡಿಪೋದ ಬಸ್ಸಿಗೆ ಉಜಿರೆಯಲ್ಲಿ ಹತ್ತಿದ ಚಾರ್ಮಾಡಿ ಕಡೆಯ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡುತ್ತಿದ್ದರೆನ್ನಲಾಗಿದೆ.

ಕೆ ಎಸ್ಆರ್ ಟಿಸಿಈ ವೇಳೆ ಬಸ್ ನಿರ್ವಾಹಕ ಶಿವ ಕುಮಾರ್ ವಿದ್ಯಾರ್ಥಿಗಳನ್ನು ಬಸ್ ಒಳಗೆ ಬನ್ನಿ ಅಥವಾ ಇಳಿದು ಹಿಂದಿನಿಂದ ಬರುವ ಬೇರೆ ಬಸ್ ನಲ್ಲಿ ಬನ್ನಿ ಎಂದು ಸೂಚಿಸಿದಾಗ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು.

ಈ ನಡುವೆ ಬಸ್ ನಿರ್ವಾಹಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಚಾರ್ಮಾಡಿ ಬಳಿ ಗುಂಪೊಂದು ಬಸ್ಸನ್ನು ತಡೆ ಹಿಡಿದಿದೆ.

Leave a Reply

Your email address will not be published. Required fields are marked *

error: Content is protected !!