March 24, 2026

ಉಳ್ಳಾಲ: ನೇಣು ಬಿಗಿದು ಯುವಕ ಆತ್ಮಹತ್ಯೆ

0
IMG-20230618-WA0015.jpg

ಉಳ್ಳಾಲ: ಯುವಕನೋರ್ವ ಮನೆಯೊಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ನಗರದಲ್ಲಿ ಸಂಭವಿಸಿದೆ.

ರಶೀದಾ ಭಾನು ಎಂಬವರ ಪುತ್ರ ಮೊಹಮ್ಮದ್‌ ನೂಹ್ಮನ್‌ (19) ಆತ್ಮಹತ್ಯೆಗೈದವರು.

ಖಿನ್ನತೆಗೆ ಒಳಗಾಗಿದ್ದ ನೂಹ್ಮನ್‌ ಮನೆಯ ಒಳಗಡೆ ಕೊಠಡಿಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಮಂದಿ ಬಾಗಿಲು ಒಡೆದು ನೋಡಿದಾಗ ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಐವರು ಸಹೋದರಿಯರಿಗೆ ಓರ್ವನೇ ಸಹೋದರನಾಗಿದ್ದ . ಖಿನ್ನತೆಗೆ ಕಾರಣ ತಿಳಿದುಬಂದಿಲ್ಲ.

ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!