February 4, 2026

ಲಾರಿ, ಆಟೋ ನಡುವೆ ರಸ್ತೆ ಅಪಘಾತ: ತಾಯಿ, ಮಗಳು ಸಾವು

0
image_editor_output_image292851332-1686906140328.jpg

ತುಮಕೂರು‌: ಕ್ಯಾಂಟರ್ ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ದುರಂತ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ ಆ್ಯಕ್ಸೆಲ್ ಬ್ಲೇಡ್ ಕಟ್ ಆಗಿ ಕ್ಯಾಂಟರ್ರೊಂದು ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋದಲ್ಲಿದ್ದ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ.

ಶಾಂತಲಕ್ಷ್ಮೀ(30), ಪುತ್ರಿ ಚಿನ್ಮಯಿ(5) ಮೃತ ರ್ದುದೈವಿಗಳು. ಮೃತಪಟ್ಟವರು ತುಮಕೂರಿನ ಕುಂಟಮ್ಮದ ತೋಟದವರು ಎಂದು ಗುರುತಿಸಲಾಗಿದೆ. ಇವರು ಭೀಮಸಂದ್ರದಿಂದ ಮದುವೆ ಮುಗಿಸಿ ತುಮಕೂರು ನಗರಕ್ಕೆ ಬರುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!