February 3, 2026

ಬಂಟ್ವಾಳ | ಪತ್ನಿ, ಮಾವನಿಗೆ ಚೂರಿಯಿಂದ ಇರಿತ: ಪತಿ ಪಾರಾರಿ

0
image_editor_output_image1816739022-1686895968104.jpg

ಬಂಟ್ವಾಳ: ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂದಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ ನಲ್ಲಿ ನಡೆದಿದೆ.

ಜೂನ್ 15 ರಂದು ರಾತ್ರಿ 10.30 ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು , ಚೂರಿ ಹಿಡಿದುಕೊಂಡು ಬಂದು ಪತ್ನಿ ದಿವ್ಯ ಳಿಗೆ ಇರಿಯಲು ಯತ್ನಿಸಿದ್ದಾನೆ.

ಈ ವೇಳೆ ಬಿಡಿಸಲು ಹೋದ ಮಾವ ರಾಜೀವ ರಿಗೆ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯ ಇಬ್ಬರು ಗಂಭೀರವಾಗಿ ಗಾಯಗೊಂಡು, ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *

You may have missed

error: Content is protected !!