ವಿಟ್ಲ | ಗ್ರಾ.ಪಂ ಅನುಮತಿ ಇಲ್ಲದೇ ಬೋರ್ ವೆಲ್ ಕೊರೆಯಲು ಮುಂದಾದ ವ್ಯಕ್ತಿ: ಗ್ರಾಮಸ್ಥರ ಆರೋಪ
ವಿಟ್ಲ: ವ್ಯಕ್ತಿಯೊಬ್ಬರು ಸ್ಥಳೀಯ ಗ್ರಾಮ ಪಂಚಾಯತ್ ನ ಅನುಮತಿ ಇಲ್ಲದೇ ಖಾಸಗಿ ಜಾಗದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಬುಧವಾರ ಕಡಂಬು ಸಮೀಪ ನಡೆದಿದೆ.

ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ನಿಂದ ಅನುಮತಿ ನಿರಾಕರಿಸಿದರೂ ವ್ಯಕ್ತಿಯು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ನೀರಿಲ್ಲದೆ ಕಂಗೆಟ್ಟಿದ್ದ ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದ್ದು ಕಾಮಗಾರಿಯನ್ನ ತಡೆದಿದ್ದಾರೆ.




