March 25, 2026

ಮಂಗಳೂರು: ನಾಪತ್ತೆಯಾಗಿದ್ದ ಯುವಕ ಕಿನ್ನಿಗೋಳಿಯಲ್ಲಿ ಶವವಾಗಿ ಪತ್ತೆ

0
IMG-20230613-WA0016.jpg

ಕಿನ್ನಿಗೋಳಿ: ನಾಪತ್ತೆಯಾಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾದ ಘಟನೆ ಕಿನ್ನಿಗೋಳಿ ಸಮೀಪದ ಹೊಸ ಕಾವೇರಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹೊಸಕಾವೇರಿ ನಿವಾಸಿ ಚಂದ್ರಕಾತ್ (40) ಎಂದು ಗುರುತಿಸಲಾಗಿದೆ.

ಚಂದ್ರಕಾಂತ್ ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದು ಇಂದು ಮಂಗಳವಾರ ಮದ್ಯಾಹ್ನ ಸಮೀಪದ ಹಳೆಯ ಕಪ್ಪುಕಲ್ಲಿನ ಕೋರೆಯಲ್ಲಿನ ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ.

ಇನ್ನು ಚಂದ್ರಕಾಂತ್ ಬಾವ ಕಳೆದ ಫೆಬ್ರವರಿಯಲ್ಲಿ ಮೃತರಾಗಿದ್ದರು ಈ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಚಂದ್ರಕಾಂತ್ ತೀವ್ರ ಮನನೊಂದಿದ್ದರುಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!