ಯುವತಿಯನ್ನು ಕೊಂದು ಮ್ಯಾನ್‍ಹೋಲ್ ಗೆ ಬಿಸಾಕಿದ ಅರ್ಚಕ
ಹೈದರಾಬಾದ್: ಅರ್ಚಕ ನೊಬ್ಬ ಯುವತಿಯನ್ನು ಕ್ಲಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದು ಬಳಿಕ ಶವವನ್ನು ಮ್ಯಾನ್‍ಹೋಲ್ ಗೆ ಬಿಸಾಕಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಮೃತಳನ್ನು ಕುರುಗಂಟಿ ಅಪ್ಸರಾ ಎಂದು ಗುರುತಿಸಲಾಗಿದೆ. ಈಕೆಯನ್ನು ಅಯ್ಯಗಿರಿ ವೆಂಕಟ್ ಸೂರ್ಯ ಸಾಯಿ ಕೃಷ್ಣ (36) ಕೊಲೆ ಮಾಡಿದ್ದಾನೆ.
ಆರೋಪಿ ಅಯ್ಯಗಾರಿ ವೆಂಕಟ್ ಸೂರ್ಯ ಸಾಯಿಕೃಷ್ಣಗೆ ಈಗಾಗಲೇ ಮದುವೆಯಾಗಿತ್ತು. ಈ ವಿಚಾರ ಗೊತ್ತಿದ್ದರೂ ಅಪ್ಸರಾ ತನ್ನನ್ನು ಮದುವೆಯಾಗುಂತೆ ಪೀಡಿಸಿದ್ದಾಳೆ. ಒಂದು ವೇಳೆ ನೀನು ನನ್ನ ಮದುವೆಯಾಗಲು ಒಪ್ಪಿಕೊಳ್ಳದೇ ಇದ್ದರೆ ನಮ್ಮಿಬ್ಬರ ಸಂಬಂಧದ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.
ಅಪ್ಸರಾ ವರ್ತನೆಯಿಂದ ಬೇಸರಗೊಂಡ ಸಾಯಿಕೃಷ್ಣ, ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ. ಅಂತೆಯೇ ಜೂನ್ 3ರಂದು ರಾತ್ರಿ ಅಪ್ಸರಾಳನ್ನು ಆಕೆಯ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾನೆ.
ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ಶವವನ್ನು ತನ್ನ ಕಾರಿನಲ್ಲಿ ತೆಗೆದುಕೊಂಡು ಹೋಗಿ ಮ್ಯಾನ್‍ಹೋಲ್‍ನಲ್ಲಿ ಬಿಸಾಕಿದ್ದಾನೆ. ನಂತರ ಪೊಲೀಸ್ ಠಾಣೆಗೆ ಬಂದು ಅಪ್ಸರಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ.




