March 23, 2026

ಮಂಗಳೂರು: ಕೊಂಕಣ ರೈಲು ಮಾರ್ಗದ ಹಳಿಗೆ ಕಲ್ಲು ಇರಿಸಿದ ಮಕ್ಕಳು

0
image_editor_output_image-651175440-1686379376010.jpg

ಮಂಗಳೂರು: ಸುರತ್ಕಲ್‌ ಚೊಕ್ಕಬೆಟ್ಟು ಬಳಿ ಕೆಲವು ಮಂದಿ ಮಕ್ಕಳು ಕೊಂಕಣ ರೈಲು ಮಾರ್ಗದ ಹಳಿಗೆ ಕಲ್ಲು ತೂರಾಟ ಮತ್ತು ಟ್ರ್ಯಾಕ್‌ ಮೇಲೆ ಕಲ್ಲು ಇರಿಸಿರುವ ಘಟನೆ ಮೇ 30 ರಂದು ನಡೆದಿದೆ.

ಯಶವಂತಪುರ ಬೆಂಗಳೂರು- ಕಾರವಾರ ರೈಲಿಗೆ ಬೆಳಗ್ಗಿನ ವೇಳೆ ಕಲ್ಲು ತೂರಾಟ ಕೂಡಾ ಮಾಡಲಾಗಿತ್ತು. ಹಳಿಗಳ ಮೇಲೆ ಕೆಲವು ಕಡೆ ಕಲ್ಲುಗಳನ್ನು ಇರಿಸಿರುವುದು ಕಂಡು ಬಂದಿತ್ತು.

ಈ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಸ್ಥಳೀಯ ಧಾರ್ಮಿಕ ಕೇಂದ್ರವೊಂದರ ಮುಖಂಡರ ಮುಖಾಂತರ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ.

ಘಟನೆಯ ಬಗ್ಗೆ ರೈಲ್ವೇ ಸುರಕ್ಷತಾ ಪಡೆಯ ಪೊಲೀಸರು ಜೂನ್‌ 5 ರಂದು ಮಾಹಿತಿ ನೀಡಿ ಇಂತಹ ಕೃತ್ಯಗಳಿಗೆ ನೀಡಲಾಗುವ ಶಿಕ್ಷೆಯ ಬಗ್ಗೆ ಮನವರಿಕೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!