March 22, 2026

ಗೆಳತಿಯನ್ನು 20ಕ್ಕೂ ಅಧಿಕ ತುಂಡಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ ಆರೋಪಿ

0
image_editor_output_image1266965-1686289439414.jpg

ಮುಂಬೈ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೂ ಮೀರಿಸುವ ಘಟನೆ ಮುಂಬೈನ ಮೀರಾ ರೋಡ್‌ನಲ್ಲಿರುವ ಗೀತಾ ನಗರದಲ್ಲಿ ನಡೆದಿದೆ.

ಲಿವ್- ಇನ್-‌ ಪಾರ್ಟ್‌ನರ್ ನಲ್ಲಿದ್ದ ತನ್ನ ಗೆಳತಿಯನ್ನು ಹತ್ಯೆ ಮಾಡಿರುವ ಆರೋಪಿ 20 ಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ ಕುಕ್ಕರ್‌‌ನಲ್ಲಿ ಬೇಯಿಸಿ ವಿಲೇವಾರಿ ಮಾಡುವ ಪ್ರಯತ್ನ ಮಾಡಿದ್ದಾನೆ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗೀತಾ ನಗರದ ಏಳನೇ ಹಂತದಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ 56 ವರ್ಷದ ಮನೋಜ್ ಸಹಾನಿ ಎಂಬಾತನನ್ನು ನಯಾನಗರ ಪೊಲೀಸ್ ಠಾಣೆ‌ಯ ಪೊಲೀಸರು ಬಂಧಿಸಿದ್ದಾರೆ.

ಮನೋಜ್ ಸಹಾನಿ ತನ್ನ ಗೆಳತಿ ಸರಸ್ವತಿ ವೈದ್ಯ ಜೊತೆಗೆ ಕಳೆದ ಮೂರು ವರ್ಷಗಳಿಂದ ಮುಂಬೈನ ಮೀರಾ ರೋಡ್‌ನಲ್ಲಿರುವ ಗೀತಾ ನಗರ 7 ನೇ ಹಂತದಲ್ಲಿರುವ ಗೀತಾ ಆಕಾಶ್ ದೀಪ್ ಕಟ್ಟಡದಲ್ಲಿ ಫ್ಲಾಟ್ 704 ರಲ್ಲಿ ವಾಸಿಸುತ್ತಿದ್ದರು. ಆಗ್ಗಾಗ್ಗೆ ನಡೆಯುತ್ತಿದ್ದ ಜಗಳ ತಾರಕಕ್ಕೇರಿ ಸರಸ್ವತಿಯನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!