March 21, 2026

ಕಾಸರಗೋಡು: ಹಳೆ ಸಾಮಗ್ರಿಗಳನ್ನು ಕಳವುಗೈದು ಸಾಗಾಟ ಪ್ರಕರಣ: ಪಿಕಪ್ ಚಾಲಕನ ಬಂಧನ

0
IMG-20230504-WA0062.jpg

ಕಾಸರಗೋಡು: ಹಳೆ ಸಾಮಗ್ರಿಗಳನ್ನು ಕಳವುಗೈದು ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಕಪ್ ವ್ಯಾನ್ ಚಾಲಕನೋರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಲಪಾಡಿ ಕೆ .ಸಿ ರೋಡ್ ನ ಅಶ್ರಫ್ (34) ಬಂಧಿತ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಬಂದ್ಯೋಡು ಪೇಟೆಯಲ್ಲಿನ ಅಂಗಡಿ ಯೊಂದನ್ನು ತೆರವುಗೊಳಿಸಲಾಗಿದ್ದು, ಈ ಅಂಗಡಿಯ ಶಟರ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಪಿಕಪ್ ವ್ಯಾನ್ ನಲ್ಲಿ ತುಂಬಿಸಿ ಸಾಗಾಟ ಮಾಡಿದ್ದು, ಪರಿಸರದವರು ಸಂಶಯಗೊಂಡು ಮಾಲಕನಿಗೆ ಮಾಹಿತಿ ನೀಡಿದರು.

ಇನ್ನು ಸ್ಥಳಕ್ಕೆ ಆಗಮಿಸಿದ ಮಾಲಕ ಮುಹಮ್ಮದ್ ರಿಯಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಶ್ರಫ್ ನನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ರಿಯಾಜ್ ತಪ್ಪಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!