March 20, 2026

ಬೆಳ್ತಂಗಡಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 3.30 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ವಿರುದ್ಧ FIR ದಾಖಲು

0
image_editor_output_image9062941-1686115770727.jpg

ವೇಣೂರು: ಬೆಳ್ತಂಗಡಿ ತಾಲೂಕಿನ ಒಬ್ಬ ಯುವಕನಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಸುಮಾರು 3.30 ಲಕ್ಷ ರೂ. ವಂಚನೆ ಮಾಡಿದ್ದಾರೆ. ಈ ಬಗ್ಗೆ ಇಬ್ಬರು ಆರೋಪಿಗಳ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿಯ ಅಟ್ಯಡ್ಕ ನಿವಾಸಿ ಲಿಯೋ ಪಾಯಸ್‌ ವಂಚನೆಗೊಳಗಾದವರು.

ಲಿಯೋ ಪಾಯಸ್‌ರವರ ಮನೆಗೆ ಆರೋಪಿಗಳಿಬ್ಬರು ಜ. 18ರಂದು ಬಂದು ಅವರ ಪುತ್ರ ಸುರೇಶ್ ಪಾಯಸ್ ಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಾತುಕತೆ ನಡೆಸಿದ್ದರು.

ಉದ್ಯೋಗ ಕೊಡಿಸುವುದಾಗಿ ಆರೋಪಿಗಳು 1.25 ಲಕ್ಷ ರೂ. ನಗದು ಪಡೆದು ಬಳಿಕ ವಿವಿಧ ಹಂತಗಳಲ್ಲಿ 1.37 ಲಕ್ಷ ರೂ., 40 ಸಾವಿರ, 28 ಸಾವಿರ ರೂ. ನಗದನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಬಲಿಕ ಆರೋಪಿಗಳು ಸುರೇಶ್ ಪಾಯಸ್ ಗೆ ಮೊಬೈಲ್ ಮೂಲಕ ಬಲ್ಗೇರಿಯಾಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನಕಲಿಪ್ರತಿಯನ್ನು ವಾಟ್ಸ್ ಆ್ಯಪ್ ನಲ್ಲಿ ಕಳುಹಿಸಿ ಮುಂಬೈಗೆ ಬರುವಂತೆ ತಿಳಿಸಿದ್ದಾರೆ.

ಹಾಗಗಿ ಸುರೇಶ್ ಪಾಯಸ್ ಮುಂಬೈಗೆ ತೆರಳಿದ್ದಾನೆ. ಮುಂಬೈನಲ್ಲಿ ಆತನಿಗೆ ಆರೋಪಿಗಳು ವೀಸಾ ಹಾಗೂ ವಿದೇಶಿ ಕರೆನ್ಸಿ ತರುವುದಾಗಿ ಹೇಳಿ ಹೋದವರು ಹಿಂದಿರುಗದೆ ವಂಚಿಸಿದ್ದಾರೆ.

ಈ ಬಗ್ಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಲಿಯೋ ಪಾಯಸ್‌ರವರ ಮೊಬೈಲ್‌ಗೆ ಮೆಸೇಜ್‌ ಮಾಡಿ ನಿಮ್ಮ ಪುತ್ರನ ಟಿಕೆಟ್‌ ಕ್ಯಾನ್ಸಲ್‌ ಆಗಿದೆ.

Leave a Reply

Your email address will not be published. Required fields are marked *

error: Content is protected !!