May 11, 2026

ನಾಪತ್ತೆಯಾಗಿದ್ದ ಮಗನನ್ನು ಹುಡುಕುತ್ತಾ ಮಲ್ಪೆ ಠಾಣೆಗೆ ಬಂದ ಪೋಷಕರು

0
image_editor_output_image-892622474-1686037318321.jpg

ಮಲ್ಪೆ: ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ನಾಪತ್ತೆಯಾಗಿದ್ದ 9ನೇ ತರಗತಿ ಓದುತ್ತಿದ್ದ ಆದಿತ್ಯಾ ಎಂಬ ಬಾಲಕ ಹುಡುಕುತ್ತಾ ಆತನ ಮನೆಯವರು ಮಲ್ಪೆ ಠಾಣೆಗೆ ಬಂದಿದ್ದಾರೆ.

ಬೆಂಗಳೂರು ಆರ್‌.ಟಿ. ನಗರದ ತಿಮ್ಮ ರಾಯಪ್ಪ ಮತ್ತು ಆನಿತಾ ಅವರ ಪುತ್ರ ಆದಿತ್ಯ ನಾಪತ್ತೆಯಾದ ಬಾಲಕ. ಈತ ಯಲಹಂಕದ ನ್ಯೂ ಟೌನ್‌ ನ್ಯಾಶನಲ್‌ ಪಬ್ಲಿಕ್‌ನ 9ನೇ ತರಗತಿ ಓದುತ್ತಿದ್ದಾರೆ.

ಅಮ್ಮನ ಮೊಬೈಲ್ ಪಡೆದಿದ್ದ ಬಾಲಕ, ಮಲ್ಪೆ, ಮೈಸೂರಿನ ಕೆಲವು ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಅದಾದ ನಂತರ ಮೇ 29 ರಂದು ಕಟ್ಟಿಂಗ್ ಶಾಪ್ಗೆ ಹೋಗ್ತೀನಿ ಎಂದು ಹೋದ ಬಾಲಕ ಮತ್ತೆ ವಾಪಸ್ ಬಂದಿಲ್ಲ.

ಕೊನೆಗೆ ಅಪ್ಪ-ಅಮ್ಮ ಹುಡುಕಾಡಿದಾಗ, ಮನೆಯಲ್ಲಿದ್ದ ಒಂದಷ್ಟು ಬಟ್ಟೆಗಳನ್ನೂ ತುಂಬಿಕೊಂಡು ಹೋಗಿರೋದು ಬೆಳಕಿಗೆ ಬಂದಿದೆ. ಜೊತೆಗೆ ಸಿಸಿಟಿವಿಯಲ್ಲೂ ಕೆಲವು ದೃಶ್ಯಗಳು ಸೆರೆಯಾಗಿದೆ.

ಇದರ ಬೆನ್ನಲ್ಲೇ ಪೋಷಕರು ಜ್ಯೋತಿಷಿಯ ಮೊರೆ ಹೋಗಿದ್ದಾರೆ. ಜ್ಯೋತಿಷಿಯು ದಕ್ಷಿಣ ಕರಾವಳಿ ಭಾಗದಲ್ಲಿ ಇದ್ದಾನೆ ಎಂದು ತಿಳಿಸಿದ್ದರಂತೆ. ಜ್ಯೋತಿಷಿ ಮಾತಿನಿಂದ ಪೋಷಕರು ದಕ್ಷಿಣ ಕನ್ನಡಕ್ಕೆ ಹೋಗಿ ಹುಡಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!