August 13, 2026

ಮೂಡುಬಿದಿರೆ : ಬೈಕ್, ಖಾಸಗಿ ಬಸ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು, ಸಹ ಸವಾರ ಗಂಭೀರ

0
IMG-20230605-WA0024.jpg

ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಸೋಮವಾರ ಸಂಜೆ ನಡೆದ ಬೈಕು ಮತ್ತು ಖಾಸಾಗಿ ಬಸ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದ್ದು,ಬೈಕ್ ಹಿಂಬದಿಯಲ್ಲಿದ್ದ ಸಹ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಮೂಡುಬಿದಿರೆಯ ಮೈಟ್ ಕಾಲೇಜಿನ ಬಳಿ ಈ ಅಪಘಾತ ಸಂಭವಿಸಿದ್ದು ಮೃತ ಸವಾರನನ್ನು ಎಡಪದವು ನಿವಾಸಿ ಕಾರ್ತಿಕ್ (17) ಎಂದು ಗುರುತ್ತಿಸಲಾಗಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿದ್ದಾರೆ.

ಮೂಡುಬಿದಿರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತದಲ್ಲಿ ಅನೇಕರು ಪ್ರಾಣ ಕಳಕೊಂಡಿದ್ದರೆ ಮತ್ತೆ ಅನೇಕರು ಶಾಶ್ವತ ಅಂಗ ಊನರಾಗಿದ್ದಾರೆ.

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ರಹಿತ ವಾಹನಗಳನ್ನು ಓಡಿಸುತ್ತಿದ್ದು ತ್ರಿಬಲ್ ರೈಡ್ ಇಲ್ಲಿ ಮಾಮೂಲಾಗಿದೆ.

ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!