August 13, 2026

ಟೋಲ್ ವಿಚಾರಕ್ಕೆ ಸಿಬ್ಬಂದಿ ಯುವಕರ ಮಧ್ಯೆ ಗಲಾಟೆ: ಯುವಕನ ಕೊಲೆಯಲ್ಲಿ ಅಂತ್ಯ

0
image_editor_output_image-902434980-1685954306378.jpg

ರಾಮನಗರ: ಟೋಲ್ ವಿಚಾರಕ್ಕೆ ಸಿಬ್ಬಂದಿ ಹಾಗೂ ಯುವಕರ ಮಧ್ಯೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಹೆಜ್ಜಾಲ ಸಮೀಪ ನಡೆದಿದೆ.

ಪವನ್ (30) ಕೊಲೆಯಾದ ಯುವಕ. ಈತ ಬಿಡದಿ ಬಳಿಯ ಶೇಷಗಿರಿ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ.

ಭಾನುವಾರ ರಾತ್ರಿ ಟೋಲ್ ಕಟ್ಟುವ ವಿಚಾರಕ್ಕೆ ಬೆಂಗಳೂರು ಮೂಲದ ಯುವಕರು ಗಲಾಟೆ ಮಾಡಿ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಹಾಕಿ ಸ್ಟಿಕ್‌ನಿಂದ ಆತನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.

ಮೃತ ಪವನ್ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಸಿಕ್ಕೆಪಾಳ್ಯ ನಿವಾಸಿಯಾಗಿದ್ದ. ಹತ್ಯೆಗೂ ಮುನ್ನ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಟೋಲ್ ಹಣ ಕಟ್ಟಲ್ಲ ಎಂದು ಬೆಂಗಳೂರು ಮೂಲದ ಯುವಕರು ಪವನ್ ಜೊತೆ ಗಲಾಟೆ ನಡೆಸಿದ್ದರು.

ಗಲಾಟೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲಸ ಮುಗಿಸಿ ಮನೆಗೆ ಹೊರಟ ಪವನ್‌ನನ್ನು ಟೋಲ್‌ನಿಂದ ಫಾಲೋ ಮಾಡಿಕೊಂಡು ಹೋಗಿದ್ದಾರೆ.

ಬಳಿಕ ಹೆಜ್ಜಾಲ ಸಮೀಪ ಹಾಕಿ ಸ್ಟಿಕ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!