March 22, 2026

ಮಂಗಳೂರು: ಉದ್ಯಮಿಗಳಿಗೆ 1.15 ಕೋಟಿ ರೂ. ವಂಚನೆ: ಉದ್ಯಮಿ ವಿಶ್ವನಾಥ್ ಶೆಟ್ಟಿಗೆ ಜಾಮೀನು

0
image_editor_output_image1411638573-1685943505994.jpg

ಮಂಗಳೂರು: ಮಂಗಳೂರು ನಗರದ ಉದ್ಯಮಿಗಳಿಗೆ 1.15 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದ ಮುಂಬೈ ಉದ್ಯಮಿ ವಿಶ್ವನಾಥ್ ಶೆಟ್ಟಿಯವರಿಗೆ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಮಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆ ‘ರೋಹನ್ ಕಾರ್ಪೊರೇಷನ್’ ಮುಖ್ಯಸ್ಥರಾದ ರೋಹನ್ ಮುಂತೇರೋ ಮತ್ತು ತೊಕ್ಕೊಟ್ಟುವಿನ ‘ಹರ್ಷ ಫೈನಾನ್ಸ್‌’ನ ಮಾಲಕ ಹರೀಶ್ ರವರಿಗೆ ಕಳತ್ತೂರು ವಿಶ್ವನಾಥ್ ಶೆಟ್ಟಿ ಮತ್ತು ಮುಂಬೈನ ಕದಂ ಎಂಬವರು 300 ಕೋಟಿ ರೂ. ಸಾಲ ತೆಗೆಸಿ ಕೊಡುವ ಆಮಿಷ ಒಡ್ಡಿ 1.15 ಕೋಟಿ ರೂ. ಹಣವನ್ನು ವಂಚಿಸಿದ್ದು ಎಂದ ಆರೋಪದದಡಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪೈಕಿ ವಿಶ್ವನಾಥ್ ಶೆಟ್ಟಿ ಅವರನ್ನು ಒಂದು ವಾರದ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ಹೊರವಲಯದಲ್ಲಿ ಬಂಧಿಸಲಾಗಿತ್ತು.

ಆದ್ರೆ ವಿಶ್ವನಾಥ್ ಶೆಟ್ಟಿಗೆ ಮಂಗಳೂರಿನ ಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಮತ್ತೋರ್ವ ಆರೋಪಿ ಕದಂ ಪೊಲೀಸ್ ವಶದಲ್ಲಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!