August 12, 2026

ಜಲಪಾತದಲ್ಲಿ ಜಾರಿ ಬಿದ್ದು ಯುವತಿ ಸಾವು

0
image_editor_output_image-1328450519-1685858678908.jpg

ಜಲಂಧರ್: ಉತ್ತರ ಅಮೆರಿಕದ ಈಶಾನ್ಯದಲ್ಲಿರುವ ನಯನ ಮನೋಹರ ನಯಾಗರ ಜಲಪಾತದಲ್ಲಿ ಅಚಾನಕ್ಕಾಗಿ ಕಾಲು ಜಾರಿ ಬಿದ್ದು ಭಾರತೀಯ ಮೂಲದ ಯುವತಿ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

2 ದಿನ ಕಳೆದರೂ ಯುವತಿ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿಶ್ವವಿಖ್ಯಾತ ನಯಾಗರ ಜಲಪಾತವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.

ನಯಾಗರ ನದಿ ರೂಪಿಸಿರುವ ಸುಂದರ ಮೂರು ಜಲಪಾತಗಳು ಪ್ರವಾಸಿಗರಿಗೆ ರೋಮಾಂಚಕ ಅನುಭವ ನೀಡುತ್ತವೆ. ಸೌಂದರ್ಯಸವಿಯಲು ಪಂಜಾಬ್ ಮೂಲದ ಯುವತಿ ಪೂನಮ್ದೀಪ್ ಕೌರ್ ಅವರು ಶುಕ್ರವಾರ ತನ್ನ ಸ್ನೇಹಿತರೊಂದಿಗೆ ಬಂದಿದ್ದರು.

ಈ ವೇಳೆ ಆಯತಪ್ಪಿ ಜಲಪಾತಕ್ಕೆ ಬಿದ್ದಿದ್ದಾರೆ. ವಿಷಯ ತಿಳಿದ ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಹುಡುಕಾಟ ಆರಂಭಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!