ಉಡುಪಿ: 6 ತಿಂಗಳ ಗರ್ಭಿಣಿ ನಾಪತ್ತೆ
ಉಡುಪಿ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗುಡಾಲಬೆಟ್ಟು ನಿವಾಸಿ 22ರ ಹರೆಯದ ಲಕ್ಷ್ಮೀ ಎಂಬ 6 ತಿಂಗಳ ಗರ್ಭಿಣಿ ಮೇ 25ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆಯ ಮಧ್ಯಾವಧಿಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೊರಟು ಕಾಣೆಯಾಗಿ ಆತಂಕ ಸೃಷ್ಟಿಯಾಗಿದೆ.
ಈಕೆ 5 ಅಡಿ 3 ಇಂಚು ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಎರಡು ಹುಬ್ಬುಗಳ ಮಧ್ಯೆ ಎಳ್ಳಾಕಾರದ ಮಚ್ಚೆ ಹೊಂದಿದ್ದು, ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕರೆ ಮಾಡಿ.
ಹೆಬ್ರಿ ಪೊಲೀಸ್ ಠಾಣೆ ದೂ.ಸಂ.08253-251116
ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480805463
ಕಾರ್ಕಳ ವೃತ್ತ ನಿರೀಕ್ಷಕರ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ




