March 24, 2026

ಪುತ್ತೂರು: ‘ಪ್ರಕಾಶ್ ಫೂಟ್ ವೇರ್’ ನಲ್ಲಿ ಕಳವು ಪ್ರಕರಣ:
ಇಬ್ಬರು ಆರೋಪಿಗಳ ಬಂಧನ

0
IMG-20230601-WA0033.jpg

ಪುತ್ತೂರು: ಮುಖ್ಯ ರಸ್ತೆಯ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸ್ ಬಡವಾಣೆಯ ಸಮೀರ್ (ಕಪ್ಪ), ಹಾಸನ ಶಂಕರಿಪುರಂ ನ ಚಂದ್ರಶೇಖರ್ (ಚಂದು) ಬಂಧಿತರು. ಪುತ್ತೂರು ಬಸ್‌ ನಿಲ್ದಾಣದ ಬಳಿಯ ಮಾಯಿದೆ ದೇವುಸ್‌ ಚರ್ಚ್‌ ಎದುರುಗಡೆ ‘ಪ್ರಕಾಶ್ ಫೂಟ್‌ವೇರ್’ ಎಂಬ ಹೆಸರಿನ ಚಪ್ಪಲಿ ಅಂಗಡಿಯಿಂದ 2022 ಸೆ.16 ರಂದು ಸುಮಾರು 15 ಲಕ್ಷ ರೂ. ಯನ್ನು ಕಳವುಗೈದು ಆರೋಪಿಗಳು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕಾಶ್ ಫೂಟ್‌ವೇರ್ ಮಳಿಗೆಯ ಮಾಲಕ ಸಮೀರ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!