ಚಾಮರಾಜನಗರ: ಲಘು ವಿಮಾನ ಪತನ
ಚಾಮರಾಜನಗರ: ತಾಲೂಕಿನ ಭೋಗಪುರದ ಬಳಿ ಲಘು ವಿಮಾನವೊಂದು ಪತನವಾಗಿದೆ.


ತಾಲೂಕಿನ ಎಚ್ ಮೂಕಳ್ಳಿ ಎಂಬಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಲಘು ವಿಮಾನ ಪತನವಾಗಿದೆ. ಪ್ಯಾರಾಚೂಟ್ ಬಳಸಿ ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮಸ್ಥರು ಅಪಾರ ಸಂಖ್ಯೆಅಲ್ಲಿ ನೆರೆದಿದ್ದು, ಈ ಘಟನೆಯು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.




