ನಿರ್ಮಿತಿ ಕೇಂದ್ರ ಇಂಜಿನಿಯರ್ ಮನೆಯಲ್ಲಿ ಜಿಂಕೆ ಕೊಂಬು ಸಹಿತ 4.75 ಕೋಟಿ ರೂ. ಆಸ್ತಿ ಪತ್ತೆ

ಹಾವೇರಿ: ರಾಜ್ಯದ ಹಲವೆಡೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದು, ಹಾವೇರಿ ನಿರ್ಮಿತಿ ಕೇಂದ್ರ ಎಂಜಿನಿಯರ್ ವಾಗೀಶ್ ಶೆಟ್ಟರ್ ಮನೆಯಲ್ಲಿ ಜಿಂಕೆ ಕೊಂಬು ಸಮೇತ ಒಟ್ಟು 4.75 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅದೇ ರೀತಿ ರಾಣೇಬೆನ್ನೂರು ನಗರದಲ್ಲಿರುವ ವಾಗೀಶ್ ಶೆಟ್ಟರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಅರ್ಧ ಕೆಜಿ ಬಂಗಾರ, 2 ಕೆಜಿ ಬೆಳ್ಳಿ, 18.30 ಲಕ್ಷ ರೂ. ಹಣ, ಹಣ ಎಣಿಕೆ ಮಾಡುವ ಯಂತ್ರ, 3 ಕಾರು, 2 ಟ್ರ್ಯಾಕ್ಟರ್, 2 ಬೈಕ್, 8 ಮನೆ ಪತ್ತೆಯಾಗಿದೆ.