ಬಿರುಗಾಳಿಗೆ ಕಚ್ಚಾ ಇಟ್ಟಿಗೆ ಗೋಡೆ ಕುಸಿತ: ಮಹಿಳೆ ಸಾವು

ರಬಕವಿ-ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಗ್ರಾಮದ ರಾಮಣ್ಣ ನೇಸೂರ ಅವರ ಮನೆಯ ಪತ್ರಾಸ ಗೋಡೆಗೆ ಹೊಂದಿಕೊಂಡಿದ್ದ ಕಚ್ಚಾ ಇಟ್ಟಿಗೆ ಗೋಡೆ ಕುಸಿದ ಪರಿಣಾಮವಾಗಿ ಪಾರ್ವತಿ ನೇಸರೂ(೪೫) ಎಂಬ ಮಹಿಳೆ ಬಲಿಯಾದ ವರದಿಯಾಗಿದೆ.
ಗೋಡೆ ಕುಸಿದು ಗಾಯಗೊಂಡಿದ್ದ ಪಾರ್ವತಿಯವರನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲಿ ನಿಧನರಾದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಅಮಸಿದ್ಧ ಬಿರಾದಾರ ಇದ್ದರು.