November 19, 2026

ಖ್ಯಾತ ಕಲಾವಿದ ಹರೀಶ್ ಪೆಂಗನ್ ನಿಧನ

0
image_editor_output_image-1313025233-1685515022784.jpg

ಮಾಲಿವುಡ್‌ನ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರದಂದು (ಮೇ 30) ನಿಧನರಾಗಿದ್ದಾರೆ.

ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿಂದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಗ ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನರಾಗಿದ್ದಾರೆ.
ಹರೀಶ್ ಪೆಂಗನ್ ಅವರು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಸಹಜ ನಟನೆಯ ಮೂಲಕ ಗಮನ ಸೆಳೆದಿದ್ದರು. ‘ಪ್ರತೀಕಾರಂ’, ‘ಮಿನ್ನಲ್ ಮುರಳಿ’, ‘ವೆಳ್ಳರಿಪಟ್ಟಣಂ’, ‘ಜಾನೆ ಮನ್’, ‘ಜಯ ಜಯ ಜಯ ಹೇ’, ‘ಜೋ & ಜೋ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹರೀಶ್ ಪೆಂಗನ್ ನಟಿಸಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!