April 5, 2025

ಕುಂದಾಪುರ: ಕಂದಕಕ್ಕೆ ಬಿದ್ದ ಸೌಂಡ್‌ ಸಿಸ್ಟಂ ಸಾಗಾಟ ಲಾರಿ

0

ಕುಂದಾಪುರ: ಸಭೆ ಸಮಾರಂಭಗಳಿಗೆ ಸೌಂಡ್ ಸಿಸ್ಟಂ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಮ್ಮಾಡಿಯ ಜಾಲಾಡಿ ಎಂಬಲ್ಲಿ ಹೊಸ ಟೊಯೊಟಾ ಶೋ ರೂಂ ಮುಂಭಾಗದಲ್ಲು ಇಂದು ಸಂಜೆ ನಡೆದಿದೆ.

ಈ ಭಾಗದಲ್ಲಿ ನೇರ ರಸ್ತೆಯಿದ್ದು ವಾಹನ ಸವಾರರು ಸಾಮಾನ್ಯವಾಗಿ ಅತೀ ವೇಗದಲ್ಲಿ ಸಂಚರಿಸುತ್ತಾರೆ. ಅತೀ ವೇಗವೇ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!