ಐಪಿಎಲ್ 2023:
ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ಪಡೆದ ಮೊತ್ತವೆಷ್ಟು ಗೊತ್ತೆ?
ಅಹಮದಾಬಾದ್: ಕಳೆದ ಎರಡು ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಿದ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್) ನಿನ್ನೆ ತಡರಾತ್ರಿ ಮುಕ್ತಾಯಗೊಂಡಿತು. 5ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಚೆನೈ ಸೂಪರ್ ಕಿಂಗ್ಸ್ 14 ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಪಂದ್ಯ ಮುಕ್ತಾಯದ ಬಳಿಕ ಈ ಸೀಸನ್ನಿನ ಅತ್ಯುತ್ತಮ ಆಟಗಾರರು, ಬೆಸ್ಟ್ ಸ್ಟೇಡಿಯಂ ಆಫ್ ದಿ ಟೂರ್ನಿ, ಬೆಸ್ಟ್ ಕ್ಯಾಚ್ ಆಫ್ ದಿ ಟೂರ್ನಿ ಸೇರಿದಂತೆ ಹಲವು ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನಡೆಯಿತು.
ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2023ರ ಕಪ್ ಮತ್ತು 20 ಕೋಟಿ ರೂ ಚೆಕ್ ಪಡೆದಿದೆ.
ರನ್ನರ್ ಅಪ್ ಆದ ಗುಜರಾತ್ ಜೈಂಟ್ಸ್ ತಡ ರನ್ನರ್ ಅಪ್ ಶೀಲ್ಡ್ ಮತ್ತು 12.5 ಕೋಟಿ ರೂ ಚೆಕ್ ಪಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಫೇರ್ ಪ್ಲೇ ಪ್ರಶಸ್ತಿ.
ಬೆಸ್ಟ್ ಸ್ಟೇಡಿಯಂ ಅಫ್ ದಿ ಟೂರ್ನಿ ಪ್ರಶಸ್ತಿಯನ್ನು ಮತ್ತು ತಲಾ (50 ಲಕ್ಷ ರೂ) ಈಡನ್ ಗಾರ್ಡನ್ಸ್ ಮತ್ತು ವಾಂಖೆಡೆಗೆ ಪಡೆದುಕೊಂಡಿದೆ.
ಪೈನಲ್ ಪಂದ್ಯದ ಪ್ರಶಸ್ತಿ:
ಪ್ಲೇಯರ್ ಆಫ್ ದಿ ಮ್ಯಾಚ್:
ಡೆವೊನ್ ಕಾನ್ವೆ (5 ಲಕ್ಷ ರೂ.)
ಕ್ಯಾಚ್ ಆಫ್ ದಿ ಮ್ಯಾಚ್:
ಎಂ.ಎಸ್ ಧೋನಿ (1 ಲಕ್ಷ ರೂ.)
ಲಾಂಗೆಸ್ಟ್ ಸಿಕ್ಸ್:
ಸಾಯಿ ಸುದರ್ಶನ್ (1 ಲಕ್ಷ ರೂ)
ಗರಿಷ್ಠ ಬೌಂಡರಿ:
ಸಾಯಿ ಸುದರ್ಶನ್ (1 ಲಕ್ಷ ರೂ.)
ಅತ್ಯಂತ ಮೌಲ್ಯಯುತ ಆಟಗಾರ:
ಸಾಯಿ ಸುದರ್ಶನ್ (1 ಲಕ್ಷ ರೂ.)
ಗೇಮ್ ಚೇಂಜರ್ ಪ್ರಶಸ್ತಿ:
ಸಾಯಿ ಸುದರ್ಶನ್ (1 ಲಕ್ಷ ರೂ)
ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್:
ಅಜಿಂಕ್ಯ ರಹಾನೆ (1 ಲಕ್ಷ ರೂ.)
2023 ಐಪಿಎಲ್ ಟೂರ್ನಿಯ ಬೆಸ್ಟ್ ಆಟಗಾರ ಪ್ರಶಸ್ತಿ:
ಆರೆಂಜ್ ಕ್ಯಾಪ್:
ಶುಭಮನ್ ಗಿಲ್, 17 ಪಂದ್ಯ 890 ರನ್‌ಗಳು (10 ಲಕ್ಷ)
ಪರ್ಪಲ್ ಕ್ಯಾಪ್:
ಮೊಹಮ್ಮದ್ ಶಮಿ, 17 ಪಂದ್ಯಗಳು, 28 ವಿಕೆಟ್ (10 ಲಕ್ಷ ರೂ.)
ಕ್ಯಾಚ್ ಆಫ್ ದಿ ಸೀಸನ್:
ರಶೀದ್ ಖಾನ್ (10 ಲಕ್ಷ ರೂ.)
ಲಾಂಗೆಸ್ಟ್ ಸಿಕ್ಸ್ ಆಫ್ ದಿ ಟೂರ್ನಿ:
ಫಾಫ್ ಡು ಪ್ಲೆಸಿಸ್ , 115 ಮೀ (10 ಲಕ್ಷ ರೂ.)
ಅತೀ ಹೆಚ್ಚು ಬೌಂಡರಿ:
ಶುಭಮನ್ ಗಿಲ್, 85 ಬೌಂಡರಿ (10 ಲಕ್ಷ ರೂ.)
ಉದಯೋನ್ಮುಖ ಆಟಗಾರ:
ಯಶಸ್ವಿ ಜೈಸ್ವಾಲ್, 14 ಪಂದ್ಯ 625 ರನ್ (10 ಲಕ್ಷ ರೂ.)
ಅತ್ಯಂತ ಮೌಲ್ಯಯುತ ಆಟಗಾರ:
ಶುಭಮನ್ ಗಿಲ್ (10 ಲಕ್ಷ ರೂ.)
ಗೇಮ್ ಚೇಂಜರ್ ಆಫ್ ದಿ ಸೀಸನ್:
ಶುಭಮನ್ ಗಿಲ್ (10 ಲಕ್ಷ ರೂ.)
ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್:
ಗ್ಲೆನ್ ಮ್ಯಾಕ್ಸ್‌ವೆಲ್ (10 ಲಕ್ಷ ರೂ.)




