September 20, 2024

ಟೆಕ್ಸಾಸ್ ನಲ್ಲಿ ವಿಮಾನ ಪತನ: ಪ್ರಯಾಣಿಕರ ಅಪಘಾತದಿಂದ ಪಾರು

0

ಟೆಕ್ಸಾಸ್: ಟೆಕ್ಸಾಸ್‌ನಲ್ಲಿ ಮಂಗಳವಾರ ಟೇಕ್‌ಆಫ್‌ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 21 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷತೆಯಾಗಿದ್ದಾರೆ ಎಂದು ವರದಿಯಾಗಿದೆ.

ಅದೃಷ್ಟವಶಾತ್, ಮೂವರು ಸಿಬ್ಬಂದಿಗಳು ಸೇರಿದಂತೆ ಎಲ್ಲಾ 21 ಪ್ರಯಾಣಿಕರನ್ನು ಈ ಅವಳಿ ಎಂಜಿನ್ ಜೆಟ್‌ನಿಂದ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಳ್ಳುವ ಮುನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಕೇಟಿ‌ ಅಗ್ನಿಶಾಮಕ ಇಲಾಖೆ ವರದಿ ಮಾಡಿದೆ.

ಮ್ಯಾಕ್‌ಡೊನೆಲ್ ಡೌಗ್ಲಾಸ್ ಎಂಡಿ -87 ವಿಮಾನವು, ಬೋಸ್ಟನ್‌ಗೆ ಹೋಗುತ್ತಿದ್ದ ಬ್ರೂಕ್‌ಶೈರ್‌ನ ಹೂಸ್ಟನ್ ಎಕ್ಸಿಕ್ಯುಟಿವ್ ಏರ್‌ಪೋರ್ಟ್‌ನಿಂದ ಹೊರಡುವಾಗ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ವರದಿಗಳ ಪ್ರಕಾರ, ಮಂಗಳವಾರ ಸಂಜೆ ಹೂಸ್ಟನ್ ಆಸ್ಟ್ರೋಸ್ ಮತ್ತು ಬೋಸ್ಟನ್ ರೆಡ್ ಸಾಕ್ಸ್ ನಡುವಿನ ಪ್ಲೇ-ಆಫ್ ಬೇಸ್‌ಬಾಲ್ ಆಟವನ್ನು ವೀಕ್ಷಿಸಲು ವಿಮಾನದಲ್ಲಿ ಅಭಿಮಾನಿಗಳನ್ನು ಕರೆದೊಯ್ಯಲಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!