March 25, 2026

ಮದುವೆ ಸಮಾರಂಭದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಗ್ಯಾಂಗ್‌ಸ್ಟರ್‌ ಬಲಿ

0
image_editor_output_image-620949143-1685348584492.jpg

ಒಟ್ಟಾವ: ಮದುವೆ ಸಮಾರಂಭದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಬಲಿಯಾಗಿರುವ ಘಟನೆ ಕೆನಡಾದ ವ್ಯಾಂಕೋವರ್‌ ನಗರದಲ್ಲಿ ನಡೆದಿದೆ.

ತಡರಾತ್ರಿ ಸುಮಾರು 1:30ರ ವೇಳೆಗೆ ಗುಂಡಿನ ದಾಳಿ ನಡೆದಿದ್ದು, 28 ವರ್ಷದ ಅಮರ್‌ ಪ್ರೀತ್‌ (ಚುಕ್ಕಿ) ಬಲಿಯಾಗಿದ್ದಾನೆ. ಗ್ಯಾಂಗ್‌ಸ್ಟರ್‌ಗಳಾಗಿದ್ದ ಅಮರ್‌ ಪ್ರೀತ್‌ ಸಹೋದರರಾದ ಸಮ್ರಾ ಮತ್ತು ರವೀಂದರ್‌ ಇಬ್ಬರೂ ಮದುವೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಾರಂಭಕ್ಕೆ ಕೆಲವು ಅಪರಿಚಿತ ವ್ಯಕ್ತಿಗಳೂ ಸೇರಿದಂತೆ 60 ಮಂದಿ ಹಾಜರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!