ಕಾರ್ಕಳ: ರಸ್ತೆ ಅಪಘಾತ: ಸ್ಕೂಟರ್ ಚಾಲಕ ಮೃತ್ಯು

ಕಾರ್ಕಳ : ಪ್ರಾಣಿಯೊಂದು ಇಲೆಕ್ಟ್ರಿಕ್ ಸ್ಕೂಟರ್‌ಗೆ ಅಡ್ಡ ಬಂದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಸದಾನಂದ ಶೆಟ್ಟಿ (45) ಎಂದು ಗುರುತಿಸಲಾಗಿದೆ. ಇವರು ಮೇ 26 ತನ್ನ ಮಗನೊಂದಿಗೆ ಶಿರ್ಲಾಲಿನಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳಿದ್ದು, ವಾಪಾಸ್ಸು ಬರುವಾಗ ಹಿರ್ಗಾನ ಗ್ರಾಮದ ಬಿ ಎಮ್ ಶಾಲೆಯ ಬಳಿ ತಲುಪುವಾಗ ಯಾವುದೋ ಪ್ರಾಣಿಯೊಂದು ರಸ್ತೆಯಲ್ಲಿ ಅಡ್ಡ ಬಂದ ಕಾರಣ ಸ್ಕೂಟರ್ ಸವಾರಿ ಮಾಡುತ್ತಿದ್ದ ಸದಾನಂದ ಶೆಟ್ಟಿರವರು ಸ್ಕೂಟರ್‌ಗೆ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ.
ಈ ವೇಳೆ ಸ್ಕೂಟರ್‌ನೊಂದಿಗೆ ಸದಾನಂದ ಶೆಟ್ಟಿ ಮತ್ತು ಹಾಗೂ ಅವರ ಮಗ ಸ್ಪರ್ಷ್ ರಸ್ತೆಗೆ ಬಿದ್ದಿದ್ದಾರೆ.
ಈ ವೇಳೆ ಸದಾನಂದ ಶೆಟ್ಟಿರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸದಾನಂದ ಶೆಟ್ಟಿ ಸಾವನಪ್ಪಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.